ತಂಬಾಕು ಗಿಡವನ್ನು ಹೆಚ್ಚಾಗಿ ಇದರ ಎಲೆಗಳಿಗಾಗಿ ಬೆಳೆಸುತ್ತಾರೆ. ತಂಬಾಕು ಎಲೆಪುಡಿಯಿಂದ ಸಿಗರೇಟ್, ಬೀಡಿ, ಸುಟ್ಟೆ, ಗುಟ್ಕಾ ಉತ್ಪನ್ನ ಮಾಡುತ್ತಾರೆ. ತಂಬಾಕು ಗಿಡವನ್ನು ಹೊಗೆಸೊಪ್ಪು ಎಂದು ಕರೆಯುತ್ತಾರೆ. ಇದು ಸೊಲನೇಸಿಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ ಗಿಡ . ಇದರ ಸಸ್ಯ ಶಾಸ್ತ್ರ ಹೆಸರುನಿಕೊಟಿನ ಟಬಕಂ. ಲಿನ್ನೇ( .). ಸಿಗರೇಟ್, ಬೀಡಿ, ಗುಟ್ಕಾಗಳನ್ನು ವರ್ಜಿನೀಯಾ ಟೊಬಾಕೋಎನ್ನುವ ಜಾತಿ ಎಲೆ/ಪತ್ರಗಳಿಂದ ಉತ್ಪನ್ನ ಮಾಡಲಾಗುತ್ತದೆ. ತಂಬಾಕು ಗಿಡದಲ್ಲಿ ಇನ್ನೊಂದು ಜಾತಿ ಗಿಡದ ಹೆಸರು ನಿಕೋಟಿನ ರಸ್ಟಿಕ. ಲಿನ್ನೆ( .). ತಂಬಾಕು ಬೀಜದಲ್ಲಿ ಎಣ್ಣೆ ಇರುತ್ತದೆ .ತಂಬಾಕು ಎಲೆಗಳಿಂದ ನಿಕೊಟಿನ್ ಮತ್ತು ಔಷಧ ಗುಣ ಇರುವ ಪದಾರ್ಥಗಳನ್ನು ಉತ್ಪನ್ನ ಮಾಡಲಾಗುತ್ತದೆ ,. == ಭಾರತೀಯ ಭಾಷೆಗಳಲ್ಲಿ ತಂಬಾಕು ಹೆಸರು == ಅಸ್ಸಾಂ=ಧೂಪತ್() ಬೆಂಗಾಲಿ=ತಮಕ್() ಒರಿಯಾ=ಉಮನ್ ಪತ್ರ( ) ತಮಿಳು=ಪುಗಯಿಲೈ() ಮಲಯಾಳಮ್=ಪುಗಯಿಲ() ತೆಲುಗು=ಪೊಗಾಕು() ಗುಜರಾತಿ=ತಮಕು() ಮರಾಠಿ,ಹಿಂದಿ,ಪಂಜಾಬಿ=ತಂಬಾಕು() === ಭಾರತದಲ್ಲಿ ತಂಬಾಕು ಸಾಗುವಳಿ ಮಾಡುತ್ತಿರುವ ರಾಜ್ಯಗಳು === ಅಸ್ಸಾಂ ಗುಜರಾತ್ ಉತ್ತರಪ್ರದೇಶ ಆಂಧ್ರ ಪ್ರದೇಶ ಪಶ್ಚಿಮ ಬಂಗಾಳ ಬಿಹಾರ ರಾಜಸ್ಥಾನ ಕರ್ನಾಟಕ ಮಹಾರಾಷ್ಟ್ರ === ಪ್ರಪಂಚದಲ್ಲಿ ತಂಬಾಕು ಬೆಳೆಸುತ್ತಿರುವ ದೇಶಗಳು === ಪ್ರಪಂಚದಲ್ಲಿ ತಂಬಾಕನ್ನು ಹೆಚ್ಚಾಗಿ ಬೆಳೆಸುವ ದೇಶಗಳಲ್ಲಿ ಜಿಂಬಾಬ್ವೆ ಪ್ರಥಮ ಸ್ಥಾನದಲ್ಲಿದೆ (೨೦೦೮-೨೦೦೯ ವರ್ಷಕ್ಕೆ). ಎರಡನೆ ಸ್ಥಾನದಲ್ಲಿ ಚೈನಾ ದೇಶವಿದೆ. ಉಳಿದಿರುವ ದೇಶಗಳಲ್ಲಿ ಅರ್ಜೆಂಟಿನಾ, ಬ್ರೆಜಿಲ್, ಬಲ್ಗೆರಿಯಾ, ಗ್ರೀಸ್, ಇಂಡೋನೇಷಿಯಾ, ಕೊರಿಯಾ, ಪಾಕಿಸ್ತಾನ್, ಥಾಯ್ ಲಾಂಡ್ ,ಟರ್ಕಿ, ಅಮೆರಿಕ ಮತ್ತು ಭಾರತ ದೇಶಗಳು ಇವೆ. . === ಗಿಡ-ಬೀಜ/ವಿತ್ತನ === ಗಿಡ: ಗಿಡ ೧ ಮೀಟರನಿಂದ ಮೂರು ಮೀಟರುಗಳ ಎತ್ತರ ಬೆಳೆಯುತ್ತದೆ. ಏಕ ವಾರ್ಷಿಕ ಗಿಡ. ದೃಢವಾದ ಕಾಂಡವನ್ನು ಹೊಂದಿರುವ ಗಿಡ. ಗಿಡದ ಕಾಂಡ ನೆಟ್ಟಗೆ ಬೆಳೆಯುತ್ತದೆ. ಕೊಂಬೆಗಳು ಕಡಿಮೆ. ಉಷ್ಣಮಂಡಲ ಪ್ರಾಂತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೇಸಾಯಕ್ಕೆ ಕರಿನೆಲ( )ಉತ್ತಮ. ಮಳೆಸುರಿತ ೫೦-೧೦೦ ಮಿ.ಮೀ.(ಸಾಗುವಳಿ ಸಮಯದಲ್ಲಿ) ಇರಬೇಕು. ಎಲೆಗಳು ಉದ್ದವಾಗಿರುತ್ತವೆ. ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ. ಪತ್ರಗಳ ಅಂಚು ಸೂಚಿಯಾಗಿರುತ್ತದೆ. ವಿತ್ತನ:ಬೀಜ/ವಿತ್ತನಗಳು ಕಂದು()ಬಣ್ಣದಲ್ಲಿದ್ದು, ಸಾಸಿವೆಗಿಂತ ಸ್ವಲ್ಪ ದೊಡ್ಡ ಪ್ರಮಾಣದಲ್ಲಿರುತ್ತವೆ. ಬೀಜ ಗೋಲಾಕಾರದಲ್ಲಿರುತ್ತದೆ. ಬೀಜ ಗಟ್ಟಿಯಾಗಿರುತ್ತದೆ. ತಂಬಾಕು ಎಲೆಗಳಲ್ಲಿ ನಿಕೊಟಿನ್ ಇದ್ದರೂ ,ಬೀಜಗಳಲ್ಲಿ ನಿಕೋಟಿನ್ ಇರುವುದಿಲ್ಲ. ತಂಬಾಕು ಬೀಜದಲ್ಲಿ ೩೫% ತನಕ ಎಣ್ಣೆ ಲಭ್ಯವಾಗುತ್ತದೆ. ಬೀಜದಲ್ಲಿ ೨೫-೨೬% ಪ್ರೋಟಿನುಗಳಿರುತ್ತವೆ .ತಂಬಾಕು ಗಿಡವನ್ನು ಎಲೆಗಳ ಸಲುವಾಗಿ ಬೆಳೆಸುತ್ತಾರೆ. ಆದ್ದರಿಂದ ಬೀಜಗಳನ್ನು ಉಪವುತ್ಪತ್ತಿ ಎಂದು ಹೇಳಬಹುದು( ). ತಂಬಾಕು ಬೀಜದಲ್ಲಿರುವ ಪದಾರ್ಥಗಳ ಪಟ್ಟಿ === ಎಣ್ಣೆಯನ್ನು ತೆಗೆಯುವ ಪದ್ಧತಿಗಳು === ತಂಬಾಕು ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಎನ್ನುವ ಯಂತ್ರವನ್ನು ಬಳಸಿ, ಅಥವಾ ಸಾಲ್ವೆಂಟ್ ಎಕ್ಸುಟ್ರಾಕ್ಷನು ಕಾರ್ಖಾನೆ ಸಹಾಯದಿಂದ ತೆಗೆಯಲಾಗುತ್ತದೆ === ತಂಬಾಕು ಬೀಜದ ಎಣ್ಣೆ === ಬೀಜದಿಂದ ತೆಗೆದ ಎಣ್ಣೆ ಕಪ್ಪು, ಕಂದು( )ಬಣ್ಣದಲ್ಲಿ, ಅಥವಾ ಹಳದಿ ಮತ್ತು ಹಸಿರು ಬಣ್ಣಗಳ ಮೇಳವಾಗಿರುತ್ತದೆ. ಎಣ್ಣೆಗೆ ತಂಬಾಕು ತರಹ ವಾಸನೆ ಇರುತ್ತದೆ. ಆದರೆ ಎಣ್ಣೆಯನ್ನು ಶುದ್ಧಿ () ಮಾಡಿದ ಮೇಲೆ ಆ ವಾಸನೆ ಇರುವುದಿಲ್ಲ. ರಿಫೈಂಡ್ ಮಾಡಿದ ಎಣ್ಣೆ ವಾಸನೆ ರಹಿತವಾಗಿರುತ್ತದೆ. ತಂಬಾಕು ಬೀಜದ ಎಣ್ಣೆ ಗುಣ ಗಣಗಳು,ಭೌತಿಕ ಲಕ್ಷಣಗಳು ಮತ್ತು ಅದರಲ್ಲಿರುವ ಕೊಬ್ಬಿನ ಆಮ್ಲಗಳ ವಿವರಗಳು ಕೆಳಗಿನ ಪಟ್ಟಿಗಳಲ್ಲಿ ಕೊಡಲಾಗಿದೆ. ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳು ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ === ಎಣ್ಣೆಯ ಉಪಯುಕ್ತಗಳು === ರಿಪೈಂಡು ಮಾಡಿದ ಎಣ್ಣೆಯನ್ನು ತಿನ್ನುವ ಎಣ್ಣೆ ( /ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುತ್ತದೆ. ಸಾಬೂನ್(), ಮೇಣಬತ್ತಿ ತಯಾರಿಕೆಯಲ್ಲಿ ಬಳಸುತ್ತಾರೆ. ಜೈವಿಕ ಡಿಸೇಲ್( )ಲನ್ನಾಗಿ ಉಪಯೋಗಿಸ ಬಹುದು . === ಬಾಹ್ಯಾ ಕೊಂಡಿಗಳು === ://...//.?=18_1_4 2016-03-11 ವೇಬ್ಯಾಕ್ ಮೆಷಿನ್ ನಲ್ಲಿ. ://.../?=++&=&=&=&=&=zic4UvK_GImJrgfK-&=2&=0CFAQsAQ&=1366&=677&=1 === ಉಲ್ಲೇಖಗಳು ===